Thursday, March 28, 2024
HomeKannadaWeight Loss Tips Kannada | ಹೆಚ್ಚಿನ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು...

Weight Loss Tips Kannada | ಹೆಚ್ಚಿನ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..?

Weight Loss Tips Kannada | ಹೆಚ್ಚಿನ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..?

ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ನಿಮ್ಮ ದೇಹದ ತೂಕ ಮತ್ತು  ಕೊಬ್ಬನ್ನು ಕರಗಿಸುವ ವಿಧಾನಗಳು

ಅಧಿಕ ತೂಕ, ಹೊಟ್ಟೆ ಸುತ್ತದ ಕೊಬ್ಬನ್ನು ಅರಿಶಿಣ, ನಿಂಬೆರಸದಿಂದ ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..?

ಅರಿಶಿಣ ನಾವು ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಪದಾರ್ಥ ಇದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ. ಅಷ್ಟೇ ಅಲ್ಲದೆ, ಅರಿಶಿಣವನ್ನು ನಮ್ಮ ಹಿರಿಯರು ಆಂಟಿ ಸೆಪ್ಟಿಕ್ ಆಗಿ, ಗಾಯಗಳು ವಾಸಿಯಾಗಲು ಸಹ ಬಳಸುತ್ತಿದ್ದರು. ಇನ್ನು ನಿಂಬೆರಸ ಇದನ್ನೂ ಅಷ್ಟೇ ನಾವು ಅಡುಗೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತೇವೆ. ಮುಖ್ಯವಾಗಿ ನಿಂಬೆರಸ, ಸಕ್ಕರೆಯನ್ನು ನೀರಿನಲ್ಲಿ ಬೆರೆಸಿಕೊಂಡು ಶರಬತ್ ತರಹ ಕುಡಿದರೆ ದೇಹ ತಂಪಾಗುತ್ತದೆ. ಆದರೆ ಅರಿಶಿಣ, ನಿಂಬೆರಸಗಳನ್ನು ಉಪಯೋಗಿಸಿ ತೂಕ ಕಡಿಮೆ ಮಾಡಿಕೊಳ್ಳುವ ಸಂಗತಿ ಗೊತ್ತೇ..? ತೂಕವಷ್ಟೇ ಅಲ್ಲ, ಹೊಟ್ಟೆ ಬಳಿ ಸಂಗ್ರಹವಾಗಿರುವ ಕೊಬ್ಬು ಸಹ ಕರಗುತ್ತದೆ. ಅದೇಗೆ ಎಂದು ಈಗ ನೋಡೋಣ.

Weight loss Tips Kannada

1. ಒಂದು ಗ್ಲಾಸು ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು, 1/4 ಟೀಸ್ಫೂನ್ ಅರಿಶಿಣವನ್ನು ಮಿಕ್ಸ್ ಮಾಡಬೇಕು. ಎರಡೂ ಮಿಕ್ಸ್ ಮಾಡಿದ ಬಳಿಕ ಬೇಕೆಂದರೆ ಅದರಲ್ಲಿ ಸ್ವಲ್ಪ ಜೇನು ಬೆರೆಸಬಹುದು. ಆ ರೀತಿ ಮೂರನ್ನೂ ಬೆರೆಸಿ ಆ ನೀರನ್ನು ಉಗುರುಬೆಚ್ಚಗೆ ಇದ್ದಾಗಲೇ ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನಿತ್ಯ ಎರಡು ಬಾರಿ ಈ ಮಿಶ್ರಣವನ್ನು ಕುಡಿದರೆ ವಾರದಲ್ಲಿ ಫಲಿತಾಂಶ ಸಿಗುತ್ತದೆ. ತೂಕ ಕಡಿಮೆಯಾಗುವವರೆಗೂ ಅಥವಾ ಹೊಟ್ಟೆ ಸುತ್ತ ಸಂಗ್ರಹವಾಗಿರುವ ಕೊಬ್ಬು ಕರಗುವವರೆಗೂ ಇದನ್ನು ಕುಡಿಯಬಹುದು.

2. ಒಂದು ನಿಂಬೆಹಣ್ಣನ್ನು ಸಂಪೂರ್ಣವಾಗಿ ಹಿಂಡಿ ಅದರಲ್ಲಿನ ರಸವನ್ನು ತೆಗೆಯಬೇಕು. ಅದಕ್ಕೆ ಅರ್ಧ ಟೀಸ್ಫೂನ್ ಅರಿಶಿಣ, 1/4 ಟೀಸ್ಪೂನ್ ಕಪ್ಪು ಮೆಣಸಿನ ಪುಡಿ. 1/4 ಟೀಸ್ಫೂನ್ ಆಲೀವ್ ಆಯಿಲ್ ಬೆರೆಸಬೇಕು. ಚೆನ್ನಾಗಿ ಮಿಶ್ರಣ ಮಾಡಿದ ಮೇಲೆ 1 ಅಥವಾ 2 ಟೀಸ್ಫೂನ್ ಪ್ರಮಾಣದಲ್ಲಿ 3 ಹೊತ್ತು ಊಟದ ಬಳಿಕ ತೆಗೆದುಕೊಳ್ಳಬೇಕು. ಇದರಿಂದ ಕೊಬ್ಬು ಬೇಗ ಕರಗುತ್ತದೆ. ಹೊಟ್ಟೆ ಸಮಸ್ಯೆಯೂ ಬರಲ್ಲ.

3. ಸಣ್ಣ ಉರಿಯ ಮೇಲೆ ಒಂದು ಕಪ್ ಹಾಲನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ಬಳಿಕ ಅದರಲ್ಲಿ ಅರ್ಧ ಟೀ ಸ್ಫೂನ್ ನಿಂಬೆರಸ, ಅರ್ಧ ಟೀಸ್ಫೂನ್ ಜೇನು ಮಿಕ್ಸ್ ಮಾಡಿಕೊಳ್ಳಬೇಕು. ಇದರ ಜತೆಗೆ ವೆನೀಲಾ ಎಕ್ಸ್‌ಟ್ರಾಕ್ಟನ್ನು ಸಹ ಬೆರೆಸಬೇಕು. ಆ ಬಳಿಕ ಆ ಮಿಶ್ರಣಕ್ಕೆ ಅರ್ಧ ಟೀಸ್ಫೂನ್‌ ಅರಿಶಿಣ ಹಾಕಿ, ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಬಳಿಕ ಕೆಳಗಿಳಿಸಿ ಶೋಧಿಸಿ ಉಗುರು ಬೆಚ್ಚಗೆ ಬಿಸಿ ಮಾಡಿಕೊಂಡು ಕುಡಿಯಬೇಕು. ಈ ಪಾನೀಯವನ್ನು ಒಂದು ವಾರ ಕಾಲ ಕುಡಿದರೆ ಫಲಿತಾಂಶ ನಿಮಗೇ ಗೊತ್ತಾಗುತ್ತದೆ. ಇದನ್ನು ಊಟಕ್ಕೂ ಮುನ್ನ ಅಥವಾ ಬಳಿಕ ತೆಗೆದುಕೊಳ್ಳಬಹುದು.

Homemade Drinks To Lose Belly Fat Fast | Slimming Tips For Tummy in Kannada

weight loss foods in kannada

weight loss tips in kannada pdf

ನಿಮಗೆ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಆಸಕ್ತಿ ಇದ್ದರೆ ನಾವು ನಿಮಗೆ ಉತ್ತಮವಾದ ವೈಟ್ ಲಾಸ್ ಟ್ರೈನರ್ ಅನ್ನು ನಿಮಗೆ ಇಲ್ಲಿ ಕೊಟ್ಟಿದ್ದೇವೆ ಅವರ ಕಾಂಟಾಕ್ಟ್ ನಂಬರ್ ನೀವು ಕ್ಲಿಕ್ ಮಾಡಿ ಅವರ ಜೊತೆ ಮಾತನಾಡಬಹುದು ಅಥವಾ ವಾಟ್ಸಪ್ ಮೂಲಕ ಸಂಪರ್ಕಿಸಬಹುದು.

Whatsapp or call Click here

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments